uucms-banner

ನಮ್ಮಬಗ್ಗೆ

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ದೇಶದಲ್ಲೇ ಈ ವ್ಯವಸ್ಥೆಯನ್ನು ಬಳಕೆಗೆ ತರುತ್ತಿರುವ ಪ್ರಥಮ ರಾಜ್ಯ ಕರ್ನಾಟಕವಾಗಿದೆ. ಯು.ಯು.ಸಿ.ಎಂ.ಎಸ್ ಎಲ್ಲಾ ವಿಶ್ವವಿದ್ಯಾಲಯಗಳನ್ನು ಮತ್ತು ಕಾಲೇಜುಗಳನ್ನು ಕ್ರೂಢಿಕರಿಸಿ ಹಾಗೂ ಏಕೀಕರಿಸಿ, ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ವಿವಿಧ ಮಾಹಿತಿ ಒದಗಿಸುತ್ತದೆ. ಉನ್ನತ ಶಿಕ್ಷಣ ಇಲಾಖೆಯ ರಾಜ್ಯ ಯೋಜನೆ ನಿರ್ವಹಣಾ ಘಟಕವು UUCMS ಅಭಿವೃದ್ಧಿ ಮತ್ತು ಯೋಜನೆಯ ವಿವಿಧ ಹಂತಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಯುಯುಸಿಎಂಎಸ್ ಘಟಕಗಳು

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಗಳನ್ನು ಗಣಕೀಕರಣಗೊಳಿಸುತ್ತದೆ

ವಿದ್ಯಾರ್ಥಿಗಳ ದಾಖಾಲಾತಿಯಿಂದ ಕಲಿಕೆ, ಪರೀಕ್ಷೆಗಳು ಮತ್ತು ಪದವಿ ಪಡೆಯುವ ಎಲ್ಲಾ ಹಂತಗಳ ಕಾರ್ಯವನ್ನು ಯುಯುಸಿಎಂಎಸ್ ನ ಒಂದೇ ವ್ಯವಸ್ಥೆಯೊಳಗೆ ನಿರ್ವಹಿಸಬಹುದು.

ಹಾಗೆಯೆ ಶಿಕ್ಷಕರು ಸಂಸ್ಥೆಗೆ ಸೇರಿದ ದಿನದಿಂದ ಅವರ ಸಂಶೋಧನೆ , ಮೌಲ್ಯಮಾಪನ, ಶೈಕ್ಷಣಿಕ ಕಾರ್ಯಕ್ಷಮತೆ, ಪದೋನ್ನತಿ, ಪಠ್ಯಕ್ರಮ, ಪಾಠ ಯೋಜನೆ, ತರಗತಿ ಮೇಲ್ವಿಚಾರಣೆ, ವಿದ್ಯಾರ್ಥಿಗಳ ಹಾಜರಾತಿ ಇತರೆ ಚಟುವಟಿಕೆಗಳ ಕಾರ್ಯನಿರ್ವಹಣೆಯು UUCMS ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ.

teacher
ಶ್ರೀ. ಶ್ರೀಕರ್‌ ಎಂ.ಎಸ್, ಐ.ಎ.ಎಸ್

ಪ್ರಧಾನ ಕಾರ್ಯದರ್ಶಿಗಳು,

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

teacher
ಶ್ರೀ ಜಗದೀಶ.ಜಿ . ಐ.ಎ.ಎಸ್

ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

1521937 +

ವಿದ್ಯಾರ್ಥಿಗಳಿಗೆ

18340 +

ಶಿಕ್ಷಕರಿಗೆ

3800 +

ಕಾಲೇಜುಗಳು

24 +

ವಿಶ್ವವಿದ್ಯಾಲಯ

ರಾಜ್ಯದ ಶಿಕ್ಷಣ ನಿರ್ವಹಣಾ ವ್ಯವಸ್ಥೆಯಲ್ಲಿ ಕ್ರಾಂತಿ

ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಈ ತಂತ್ರಾಂಶವನ್ನು CSG ಯ ಸಹಯೋಗದಿಂದ ಅಭಿವೃದ್ದಿಪಡಿಸಿ ಉನ್ನತ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಯೋಜನಾ ನಿರ್ವಹಣಾ ಘಟಕವು UUCMS ಅಭಿವೃದ್ದಿಯೊಂದಿಗೆ ಉನ್ನತ ಶಿಕ್ಷಣದ ಎಲ್ಲಾ ಪಾಲುದಾರರಿಗೆ ನೆರವಾಗುತ್ತದೆ.